Loading...
Monday to Friday (9:00 AM - 5:00 PM),
Saturday (9:00 AM - 1:30 PM)
9740895869 / 8660710927 saeskarehalli@gmail.com
Image description


    ಆಶೀರ್ವಾದ ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ದೃಷ್ಟಿಯಿಂದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಬೃಹದಾಕಾರವಾಗಿ ಬೆಳೆದು ನಿಂತಿದೆ. ಈ ಮಹಾ ಸಂಸ್ಥೆಗೆ ಮಹತ್ವದ ಮೆರುಗು ನೀಡುತ್ತಿರುವ ಶಾಖೆಗಳು, ಅವುಗಳ ವಿಭಿನ್ನ ಕಾರ್ಯ ವೈಖರಿಗಳಿಂದ ನಮ್ಮ ಮಠದ ಶ್ರೇಯೋಭಿವೃದ್ಧಿಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಗಳಲ್ಲಿ ಮಹೋನ್ನತವಾದ ಕೊಡುಗೆ ನೀಡಿರುವ ಸಿಹಿಮೊಗೆಯ ಮುಕುಟ ಪ್ರಾಯದಂತಿರುವ ಶಿವಮೊಗ್ಗ ಶಾಖೆ ಸಿಬಿ ವಸಂತಗಳನ್ನು ಪೂರೈಸುತ್ತಿರುವುದು ಸಂತಸದ ಸಂಗತಿ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಅಮೃತ ಹಸ್ತದಿಂದ ಸ್ಥಾಪನೆಗೊಂಡ ಈ ಶಾಖೆ ಪ್ರಸ್ತುತ ಶ್ರೀ ಆದಿಚುಂಚನಗಿರಿ ಮಠದ ಸದಾನ ಕಾರ್ಯದರ್ಶಿಗಳಾಗಿರುವ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮಿಗಳವರ ಅವಿರತ ಪರಿಶ್ರಮದ ಫಲವಾಗಿ ಸಾಧನೆಯ ಮೂವತ್ತೆರಡು ಮೆಟ್ಟಿಲುಗಳನ್ನು ಕ್ರಮಿಸಿದೆ ಎಂಬುದು. ಮನಃತೃಪ್ತಿ ನೀಡಿದೆ. ಜಗತ್ತು ತೀವ್ರಗತಿಯಲ್ಲಿ ಮುಂದೆ ಸಾಗುತ್ತಿರುವ ಈ ಸಂದರ್ಭದಲ್ಲಿ ಭಾವಿ ಪೀಳಿಗೆಯ ಭವಿಷ್ಯ ದಿವ್ಯತೆಯಡೆಗೆ ಸಾಗಬೇಕಾದರೆ ಅವರಿಗೆ ಉತ್ತಮ ಶಿಕ್ಷಣ ಸಂಪ್ರದಾಯ, ಸಂಸ್ಕೃತಿ ನೀಡುವುದು ಅತ್ಯಂತ ಅವಶ್ಯಕ. ಶಿಕ್ಷಣ ಎಂಬುದು ಕೇವಲ ಪಠ್ಯವಲ್ಲ, ಶಿಕ್ಷಣವೆಂದರೆ ಅರವಿನಬೆಳಕು, ಚಾರಿತ್ರ್ಯ ನಿರ್ಮಾಣ ಮತ್ತು ಆತ್ಮಸಾಕಾತ್ಕಾರ ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಅಸುಪಾಸಿನ ಜನರೊಂದಿಗೆ ಬೆರೆತು ಕರ್ನಾಟಕ ಇತಿಹಾಸಕ್ಕೆ ಶ್ರೇಷ್ಠ ಕೊಡುಗೆ ನೀಡಿರುವ ಮಲೆನಾಡಿನ ಮಹೋನ್ನತರ ಗುಂಪಿಗೆ ಇನ್ನ ವಿಶೇಷತೆಯನ್ನು ಪಸರಿಸುತ್ತಿರುವುದು ಶಿವಮೊಗ್ಗ ಶಾಖೆ ಎಂಬುದರಲ್ಲಿ ಎರಡು ಮಾತಿಲ್ಲ, ಯಾವುದೇ ವ್ಯಕ್ತಿಯನ್ನು ಸಮಾಜ ಶಕ್ತಿಯನ್ನಾಗಿಸಲು ಮತ್ತುಉನ್ನತಿ ಸಕೀಯರನ್ನಾಗಿಸಲು ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸಲು ಅಥವಾ ಅವರಲ್ಲಿ ಜೀವನ ಮೌಲ್ಯಗಳನ್ನು ಮೈಗೂಡಿಸಲು ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಈ ಕಾಳಜಿಯ ಕೇಂದ್ರಬಿಂದು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಮತ್ತು ಇಲ್ಲಿಯ ಆಡಳಿತ ಮಂಡಳಿ ಹಾಗೂ ಶಿವಮೊಗ್ಗ ಜಿಲ್ಲೆಯ ಜನತೆ ಎಂಬುದನ್ನು ಬಿ. ಹೇಳಬೇಕಾಗಿಲ್ಲ. ಶಿಕ್ಷಣ ಸಂಸ್ಥೆಗಳು ಬರಿಯ ಕಟ್ಟಡಗಳಲ್ಲಿ ಮಕ್ಕಳ ಕಣ್ಣಳಲ್ಲಿ ಅಕ್ಷರ ಜ್ಞಾನವನ್ನು ಅರಳಿಸಿ ಅವರನ್ನು ಭವಿಷ್ಯದ ಜವಬ್ದಾರಿಯುತ ಮನುಷ್ಯರನ್ನಾಗಿ ರೂಪಿಸಿ ದೇವಾಲಯಗಳು, ಉತ್ತಮ ಕಟ್ಟಡಗಳು, ಸಕಲ ಸೌಲಭ್ಯಗಳು, ಉತ್ತಮ ವಿದ್ಯಾರ್ಥಿವೃಂದ ಹೀಗೆ ಏನೆಲ್ಲಾ ಇದ್ದರೂ ಸಮರ್ಥರಾದ ಬೋಧಕ ವರ್ಗ ಹೋದರೆಯಾವುದೇ ವಿದ್ಯಾಸಂಸ್ಥೆ ನಿರೀಕ್ಷಿತಯಶಸ್ಸನ್ನು ಗಳಿಸಲಾಗದು, ಯಾವುದೇ ವ್ಯಕ್ತಿಯನ್ನು ಸಮಾಜದ ಉನ್ನತಿಗಾಗಿ ಸಕ್ರಿಯರನ್ನಾಗಿಸಲು ಅಥವಾ ಅವರಲ್ಲಿ ಬೆಳ ಜಗತ್ತನ್ನು ಮೀರಿದ ಜೀವನ ಮೌಲ್ಯಗಳನ್ನು ಮೈಗೂಡಿಸಲು ಇಲ್ಲಿಯ ಶಿಕ್ಷಣ ಸಂಸ್ಥೆಗಳು ಅವಿರಥವಾಗಿ ಶ್ರಮಿಸುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಶಿಕ್ಷಕವ ಪಠ್ಯ ವಿಷಯಗಳ ಜೊತೆಗೆದೇವರು, ಧರ್ಮ, ಆಧ್ಯಾತ್ಮ, ಪ್ರಕೃತಿ, ಸಮಾಜ, ತಂತ್ರಜ್ಞಾನ ಈ ಬಗೆಗೆ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಮಲೆನಾಡಿನ ಹೆಮ್ಮೆಯ ಕವಿ ರಾಷ್ಟ್ರ ವಿಶ್ವಮಾನವ ಕುವೆಂಪು ರವರ ಮಾತಿನಂತೆ ವಿದ್ಯಾರ್ಥಿಗಳು ಭತ್ತತುಂಬುವ ಚೀಲಗಳಾಗದೆ, ಭತ್ತ ಬೆಳೆಯುವ ಗದ್ದೆಗಳನ್ನಾಗಿ ಪರಿವರ್ತಿಸಬೇಕಾಗುತ್ತದೆ. ಇಂದಿನ ಯುವ ಜನಾಂಗವನ್ನು ಸಮಾಜದ ಉನ್ನತಿಗಾಗಿ ಸಕ್ರೀಯರನ್ನಾಗಿಸಲು ಅಥವಾ ಅವರಲ್ಲಿ ಬೌದ್ಧಿಕಜಗತ್ತನ್ನು ಮೀರಿದಜೀವನ ಮೌಲ್ಯಗಳನ್ನು ಮೈಗೂಡಿಸಲು ಈ ಬಗ್ಗೆ ವಿಶೇಷ ಕಾಳಜಿಯನ್ನೊಂದಿರುವ ಬೋಧಕವರ್ಗದ ಜೊತೆಗೆ ವ್ಯವಸ್ಥೆಯೂ ಸಹ ಸುಸಜ್ಜಿತವಾಗಿರಬೇಕು. ಇದೆಲ್ಲವನ್ನೂ ಈ ಶಾಖೆಯಲ್ಲಿ ಕಂಡಿದ್ದೇವೆ, ಚುಂಚಾ ಕಲೋತ್ಸವದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ, ಆಂಟಿಗೆ ಪೆಂಟಿಗೆಯಂತಹ ಸಾಹಿತ್ಯ ಸಂಸ್ಕೃತಿಯ ಸೊಬಗನ್ನು ಸಾರುವಕಲಾ ಕೇಂದ್ರದಂತೆ ಈ ಶಾಖೆ ಗುರುತಿ ಕೊಂಡಿದೆ. ಉಚಿತ ಸಾಮೂಹಿಕ ವಿವಾಹ, ಸಂಘ ಸಂಸ್ಥೆಗಳು, ಮಹಿಳಾ ಸಂಘಗಳು ಇವುಗಳ ಕಾರ್ಯವೈಖರಿ ಸಮಾಜಕೈದಾರಿದೀಪವಾಗಿದೆ. ಶ್ರೀ ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿಗಳಾಗಿ, ಶಿವಮೊಗ್ಗ ಶಾಖೆಯ ಶ್ರೀಗಳಾಗಿ ಈ ಎಲ್ಲಾ ಯಶಸ್ಸಿನ ರೂವಾರಿಗಳಾಗಿರುವ ಪೂಜ್ಯ ಶ್ರೀ ಶ್ರೀ ಪ್ರಸನ್ನನಾ ಸ್ವಾಮೀಜಿಯವರ ಸದೃಢಅಂತಃಶಕ್ತಿ, ದೂರಾಲೋಚನೆ ಮತ್ತು ಪ್ರಸನ್ನತೆ ಈ ಯಶಸ್ಸಿನ ಆಡಿಗಲ್ಲು ಎಂಬುದನ್ನು ಸ್ಮರಿಸುತ್ತ ಈ ಹೊತ್ತಿನ ೨೫ನೇ ವರ್ಷದ ರಾಜ್ಯಮಟ್ಟದ `ರಜತಚುಂಚಾದ್ರಿ ಕ್ರೀಡೋತ್ಸವ'ದ ಶುಭ ಸಂದರ್ಭದಲ್ಲಿ ಚುಂಚಾದ್ರಿ 'ಅಕ್ಷರದೊಳ್ಳಲುಭಾಗ-೨' ಮತ್ತು ಕ್ರೀಡಾದರ್ಶನ' ಎಂಬ ಸರಣ ಸಂಚಿಕೆಗಳನ್ನು ಬಿಡುಗಡೆ ಮಾಡುತ್ತಿರುವುದುಉತ್ತಮ ಸಂಗತಿ. ಈ ಹೊತ್ತಿಗೆ ವಿಶೇಷವಾಗಿ ರೂಪಗೊಳ್ಳಲಿ, ಸಿಹಿಮೊಗೆಯ ಶಾಖೆಯಉತ್ತಮ ಕೈಂಕರ್ಯಗಳು ಇನ್ನೂ ಹೆಚ್ಚಾಗಿ ಮೂಡಿಬರಲಿ ಇವೆಲ್ಲವೂ ಯಶಸ್ಸಿನ ಗೋಮರದ ಮೆಟ್ಟಿಲುಗಳಾಗಲಿ ಎಂದುತುಂಬು ಹೃದಯದಿಂದ ಹಾರೈಸುತ್ತೇವೆ.

Mr. Jagadeesha.B

Image

Administration Officer
Sri Adichunchanagiri Shikshana Trust, Bhadravathi.

Mr. ravikumar.V

Image

Head Master
Sri Adichunchanagiri Shikshana Trust, Bhadravathi.

FACULTIES